ಕೋಣೆಯ ಮೂಲೆಯ ಹಣತೆ
ಒಸರಲು ಬೆಳಕ ಒರತೆಮನಸಿನಾಳಕೆ ಹರಿದೀತೆ
ಪ್ರೀತಿಯ ಮಂದಸ್ಮಿತೆ
******
ಮನಸು ಹರಿದಾಡುವ ದಾರಿ
ಹುಡುಕುವ ಪರಿಯೇನು
ಹೆಣ್ಣಿನ ಹೃದಯದ ರಹದಾರಿ
ನವೀಕರಿಸುವ ರೀತಿಯೇನು
ಮನಸು ಹರಿದಾಡುವ ದಾರಿ
ಹುಡುಕುವ ಪರಿಯೇನು
ಹೆಣ್ಣಿನ ಹೃದಯದ ರಹದಾರಿ
ನವೀಕರಿಸುವ ರೀತಿಯೇನು
******
ಬಣ್ಣದ ಕೊಡೆ ಚಿತ್ತಾರದ ಉಡುಪು
ಕಟ್ಟೆಯೊಡೆದ ನಗುವಿನ ಮತಾಪು
ಮರೆಯದಿರು ಮನವೇ ಆ ನೆನಪುಗಳನು
ಬಣ್ಣದ ಕೊಡೆ ಚಿತ್ತಾರದ ಉಡುಪು
ಕಟ್ಟೆಯೊಡೆದ ನಗುವಿನ ಮತಾಪು
ಮರೆಯದಿರು ಮನವೇ ಆ ನೆನಪುಗಳನು
ಬೆಂಗಾಡಿನೆಡೆಯಲಿಹ ಅಮೃತ ಸೆಲೆಯನು